ಬರ್ಮಿಂಘ್ಯಾಮ್ ಕನ್ನಡ ಸಂಸ್ಥೆಯು ನಡೆದು ಬಂದ ದಾರಿ
ಈ ಬೃಹತ್ ನಗರದಲ್ಲಿ ಕನ್ನಡವನ್ನೇ ಅರಿಯದ ಜನರ ಮದ್ಯೆ ಯಾರೊಬ್ಬರು ಬಂದು ‘ನಮಸ್ಕಾರ, ನೀವು ಕರ್ಣಾಟಕದವರಾ?’ ಎಂದರೆ ಆಗುವ ಆನಂದ ವರ್ಣಿಸಲಾಗದು. ಕ್ರಮೇಣವಾಗಿ ಜೊತೆಗೂಡಿದ ನಮ್ಮ ನಾಡಿನ ಜನತೆಗೆ ಕಂಪು ನೀಡಲೆಂದೇ 2017ರಲ್ಲಿ ಜನಿಸಿದ ‘ಕನ್ನಡ ಕಲಿ’ಯು , ಕೋವಿಡ್ ನಂತರ ಪುನರ್ಜನ್ಮ ಪಡೆದು ‘ಕನ್ನಡ ಶಾಲೆ’ಯಾಗಿ ವಿಜ್ರುಂಭಿಸುತ್ತಿದೆ.
ಈ ಕಸ್ತೂರಿ ಕನ್ನಡವು ಬರೀ ಭಾಷೆಯಷ್ಟೇ ಅಲ್ಲ, ಇದು ನಮ್ಮ ಧರ್ಮ, ಇತಿಹಾಸ, ಪರಂಪರೆ, ಸಹಿತ್ಯ ಸಿರಿಯನ್ನು ಹರಡುವ ಚಿಲುಮೆ. ಇಂತಹ ಸಿರಿಗನ್ನಡವನ್ನು ನಾವಷ್ಟೆ ಸವಿಯದೆ, ನಮ್ಮ ಮಕ್ಕಳಿಗೂ ಕಲಿಸಿ ಬೆಳೆಸಬೇಕು, ಆಗಷ್ಟೆ ನಮ್ಮ ಜೇವನ ಸಾರ್ಥಕವಾದಂತೆ. ಸಾವಿರಾರು ವರ್ಷಗಳಿಂದ ರಾಜ ಪಥದಲ್ಲಿ ನೆಡೆದು ಬಂದ ಈ ನಮ್ಮ ಭವ್ಯಕನ್ನಡವನ್ನು ನಮ್ಮ ಮನೆಗಳಲ್ಲಿ ಬೆಳೆಸೋಣ, ಮತ್ತು ನಮ್ಮ ಮನಗಳಲ್ಲಿ ಕನ್ನಡದ ದೀಪ ಹಚ್ಚೋಣ.
ಜೈ ಕನ್ನಡ ಮಾತೆ, ಜೈ ಭುವನೇಶ್ವರಿ